Multibagger Penny Stocks ಷೇರು ಮಾರುಕಟ್ಟೆಯಲ್ಲಿ ಕೆಲವು ಷೇರುಗಳು ನಿರೀಕ್ಷೆಗೂ ಮೀರಿದ ಆದಾಯ ನೀಡಿ, ಹೂಡಿಕೆದಾರರಿಗೆ ಹಣದ ಹೊಳೆಯನ್ನೇ ಹರಿಸುತ್ತವೆ ಅಂದು 1 ರೂಪಾಯಿ ಷೇರು ಹೂಡಿಕೆದಾರರಿಗೆ ಅದ್ಭುತ ಆದಾಯ ನೀಡಿದ್ದು, ಇದೀಗ ₹160ಕ್ಕೆ ಜಿಗಿದಿದೆ. ಈ ಷೇರಿನಲ್ಲಿ ನೀವು ₹1 ಲಕ್ಷ ಹೂಡಿಕೆ ಮಾಡಿದ್ದರೆ, ಅದು ಈಗ ₹90 ಲಕ್ಷಕ್ಕೆ ಏರಿಕೆ ಆಗಿರುತ್ತಿತ್ತು.

ಪೊಪೀಸ್ ಕೇರ್ಸ್ ಲಿ. (Popees Cares Ltd) ಬಂಪರ್ ರಿಟರ್ನ್ ನೀಡಿದೆ.ಇದು ಮಾರುಕಟ್ಟೆ ಏರಿಳಿತದ ನಡುವೆಯೂ ಸತತವಾಗಿ ಅಪ್ಪರ್ ಸರ್ಕ್ಯೂಟ್ ಹೊಡೆಯುತ್ತಲೇ ಇದೆ. ಇದು ಇತ್ತೀಚೆಗೆ ಪ್ರತಿದಿನವೂ ಶೇ.2ರಷ್ಟು ಹೆಚ್ಚುತ್ತಿದೆ.
ಇದನ್ನೂ ಓದಿ
- ಯಲ್ಲಾಪುರ ಮಹಿಳೆ ಹತ್ಯೆ ಪ್ರಕರಣ: ರಂಜಿತಾ ಮನೆಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ
- ರಂಜಿತಾ ಕೊಲೆ ಮಾಡಿದ್ದ ರಫೀಕ್ ಸೂಸೈಡ್
- ಯಲ್ಲಾಪುರದಲ್ಲಿ ನಾಗರಿಕತೆ ತಲೆತಗ್ಗಿಸಿದ ಕ್ರೂರ ಹತ್ಯೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಶಾಸಕ ಶಿವರಾಮ ಹೆಬ್ಬಾರ್ ಆಗ್ರಹ
ಷೇರುಪೇಟೆಯಲ್ಲಿ ಮಲ್ಟಿಬ್ಯಾಗರ್ ರಿಟರ್ನ್ ನೀಡುವ ಅನೇಕ ಷೇರುಗಳಿವೆ. ಆದರೆ, ಇಂತಹ ಷೇರುಗಳನ್ನು ಪತ್ತೆ ಮಾಡುವುದೇ ಕಷ್ಟ ಕಷ್ಟ. ಆದರೆ, ನೀವು ನಿಯಮಿತವಾಗಿ ಮಾರುಕಟ್ಟೆಯನ್ನು ಗಮನಿಸುತ್ತಿದ್ದರೆ, ಹಣಕಾಸು ತಜ್ಞರ ಸಲಹೆಗಳನ್ನು ಅನುಸರಿಸಿ ಉತ್ತಮ ಷೇರುಗಳನ್ನು ಗುರುತಿಸಬಹುದು.
ಕಳೆದ ನಾಲ್ಕು ವರ್ಷಗಳಲ್ಲಿ, ಪೊಪೀಸ್ ಕೇರ್ಸ್ ಷೇರು ಶೇ.8861 ರಷ್ಟು ಹೆಚ್ಚಾಗಿದೆ. 2020ರ ಆಗಸ್ಟ್‌ನಲ್ಲಿ ಈ ಷೇರು ಬೆಲೆ ಕೇವಲ ₹1.80 ಇತ್ತು. ಪ್ರಸ್ತುತ ಈ ಷೇರು ₹161.30ಕ್ಕೆ ಜಿಗಿದಿದೆ. ಇದು ಈ ಷೇರಿನ 52 ವಾರಗಳ ಗರಿಷ್ಠ ಮಟ್ಟವೂ ಆಗಿದೆ. ಅಂದರೆ ನಾಲ್ಕು ವರ್ಷದ ಹಿಂದೆ ಈ ಷೇರಿನಲ್ಲಿ ₹1 ಲಕ್ಷ ಹೂಡಿಕೆ ಮಾಡಿದ್ದರೆ,ಈಗ ಅದು ₹89.61 ಲಕ್ಷ ಆಗಿರುತ್ತಿತ್ತು.
ಕಳೆದ 5 ದಿನಗಳಲ್ಲಿ ಶೇ.8ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಎಲ್ಲ ವಹಿವಾಟು ದಿನಗಳಲ್ಲಿ ಶೇ.2ರಷ್ಟು ಏರಿಕೆಯಾಗಿದೆ.ಅಂದರೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಒಟ್ಟು ಶೇ.48.35ರಷ್ಟು ಲಾಭ ನೀಡಿದೆ. ಕಳೆದ 6 ತಿಂಗಳಲ್ಲಿ ಶೇ.44ರಷ್ಟು ಏರಿಕೆಯಾಗಿದೆ. 2024ರಲ್ಲಿ ಇದುವರೆಗೆ ಶೇ.175ರಷ್ಟು ಏರಿಕೆಯಾಗಿದೆ.





