suddibindu.in
ಅಂಕೋಲಾ : ಶಿರುರೂ ಗುಡ್ಡಕುಸಿತ ಉಂಟಾಗಿ ಪಕ್ಕದ ಉಳುವರೆಗೆ ಗ್ರಾಮದ ಆರು ಮನೆಗಳು ನೆಲಸಮವಾಗಿದ್ದು, ಅಲ್ಲಿನ ಜನ ಮನೆ-ಮಠ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ.ಮನೆ ಕಳೆದುಕೊಂಡ ಉಳುವರೆ ಗ್ರಾಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ಡಾ. ವಿರೇಂದ್ರ ಹೆಗ್ಗಡೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯನ ನೋಡಿದ ಹೆಗ್ಗಡೆ ಅವರು ಇಲ್ಲಿನ ಪರಿಸ್ಥಿತಿ ನೋಡಿದರೆ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ.ಅಭಿವೃದ್ಧಿ ಕಾಮಗಾರಿಯಿಂದಾಗಿ ಇಷ್ಟೊಂದು ದೊಡ್ಡ ದುರಂತವಾಗಿದೆ. ಘಟನೆಯಿಂದ ಹಾನಿಯಾಗಿರುವ ಬಗ್ಗೆ ಈಗಾಗಲೇ ಎಲ್ಲಾ ಮಾಹಿತಿಯನ್ನ ತರೆಸಿಕೊಂಡಿದ್ದೇನೆ. ಈಗಾಗಲೆ ಘಟನೆಯ ಬಳಿಕ ಅಲ್ಪ ಸ್ವಲ್ಪ ಸಹಾಯ ಮಾಡಲಾಗಿದೆ.ಮುಂದಿನ ದಿನದಲ್ಲಿ ಸಂಕಷ್ಟದಲ್ಲಿ ಇರುವವರಗೆ ಧರ್ಮಸ್ಥಳದ ವತಿಯಿಂದ ಸಹಾಯ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ
- ನಾಳೆಯಿಂದ ಅರ್ದ ದಿನ ಮಾತ್ರ ಶಾಲೆ
- ನಾಡುಮಾಸ್ಕೇರಿ ಸರ್ಕಾರಿ ಭೂಮಿಯ ಅಕ್ರಮ ಮಾರಾಟ: ಈಶ್ವರ ಗೌಡ ಆರೋಪ
- ಸೈಲ್ಗೆ ಒಂದು ವರ್ಷ ಜೈಲು ಶಿಕ್ಷೆ 8 ಸಾವಿರ ದಂಡ
ಇನ್ನೂ ಹೆದ್ದಾರಿ ಕಾಮಗಾರಿಯನ್ನ ಕೈಗೊಂಡಿರುವ ಕಂಪನಿ ಜನರಿಗೆ ಹಾನಿಯಾಗದೆ ಇರುವ ರೀತಿಯಲ್ಲಿ ಕಾಮಗಾರಿಯನ್ನ ಮಾಡಬೇಕಿದೆ.ಈ ರೀತಿಯ ಅಪಾಯ ಮತ್ತೆ ಆಗದಂತೆ ನೋಡಿಕೊಳ್ಳಬೇಕು.ಘಟನೆಯಲ್ಲಿ ನಾಪತ್ತೆಯಾಗಿರುವ ಇನ್ನೂ ಮೂವರ ಶವ ಪತ್ತೆಯಾಗಬೇಕಿದೆ. ಅದನ್ನ ಸಹ ಮಾಡುವಂತಾಗಬೇಕು.ಮನೆ ಕಳೆದುಕೊಂಡವರಿಗೆ ಕ್ಷೇತ್ರದಿಂದ ಸಹಾಯ ಮಾಡುವುದಾಗಿ ತಿಳಿಸಿದ್ದರು. ಘಟನೆಯ ಬಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿ ಸರಕಾರದಿಂದಲ್ಲೂ ಇನ್ನಷ್ಟು ಪರಿಹಾರ ದೊರಕಿಸಿಕೊಂಡುವುದಾಗಿ ಡಾ. ವಿರೇಂದ್ರ ಹೆಗ್ಗಡೆ ಭರವಸೆ ನೀಡಿದ್ದಾರೆ.