suddibindu.in
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತವಾಗಿ ಒಂದೇ ಕುಟುಂಬದ ಐವರು ಘಟನೆಯಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ.ಕುಟುಂಬ ಎಲ್ಲರನ್ನ ಕಳೆದುಕೊಂಡ ಸಾಕು ನಾಯಿಯೊಂದು ತನ್ನವರಿಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯ ಸುದ್ದಿಬಿಂದು ನ್ಯೂಸ್‌ಗೆ ಲಭ್ಯವಾಗಿದೆ.
ಹೌದು ಶಿರೂರು ಗುಡ್ಡಕುಸಿತ ಘಟನೆಯಲ್ಲಿ ಲಕ್ಷ್ಮಣ ನಾಯ್ಕ ಕುಟುಂಬ ದುರಂತ ಘಟನೆಗೆ ಸಿಲುಕಿ ಎಲ್ಲರೂ ಮೃತಪಟ್ಟಿದ್ದಾರೆ. ಲಕ್ಷ್ಮಣ ನಾಯ್ಕ ಕಳೆದ ಅನೇಕ ವರ್ಷಗಳಿಂದ ಶಿರೂರಿನಲ್ಲಿ ಹೊಟೇಲ್ ಒಂದನ್ನ ಇಟ್ಟುಕೊಂಡು ತನ್ನ ಪುಟ್ಟ ಸಂಸಾರ ನಡೆಸಿಕೊಂಡು ಬಂದಿದ್ದರು. ಅದರ ಜೊತೆ ಮನೆಯಲ್ಲಿಯಲ್ಲಿ ಎರಡು ನಾಯಿಯನ್ನ ಕೂಡ ಕುಟುಂಬದ ಸದಸ್ಯರಂತೆ ತುಂಬಾನೇ ಪ್ರೀತಿಯಿಂದ ಸಾಕಿ ಸಲುಹಿದ್ದರು.
ಇದನ್ನೂ ಓದಿ
- ಚಿಪ್ಪಿಕಲ್ಲು ಆರಿಸಲು ಹೋದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು
- ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ಸಾವು
- ಪತಿಯನ್ನ 5 ಲಕ್ಷಕ್ಕೆ ಮಾರಾಟ ಮಾಡಿದ ಪತ್ನಿ!
ಆದರೆ ಈ ದುರಂತದಲ್ಲಿ ಲಕ್ಷ್ಮಣ ನಾಯ್ಕ ಕುಟುಂಬಕ್ಕೆ ಕುಟುಂಬವೆ ಇಂದು ಘಟನೆಯಲ್ಲಿ ಸಾವನ್ನಪಿದೆ. ಆದರೆ ಅವರು ಪ್ರೀತಿಯಿಂದ ಕೈತುತ್ತು ಇಟ್ಟು ಬೆಳಸಿದ ಆ ಎರಡು ಸಾಕು ನಾಯಿಗಳು ಘಟನೆಯ ವೇಳೆ ತಪ್ಪಿ ಬದುಕುಳಿದಿದೆ. ಬಳಿಕ ಈ ಸಾಕು ನಾಯಿ ತನ್ನವರಿಗಾಗಿ ಎಲ್ಲೆಡೆ ಹುಟುಕಾಟ ನಡೆಸಿರುವ ದೃಶ್ಯ ಮಾತ್ರ ಎಂಥವರ ಕರಗುವಂತೆ ಮಾಡಿದೆ.