suddibindu.in
ಶಿವಮೊಗ್ಗ : ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ಯುವಕ ಸಾವನ್ನಪ್ಪಿದ ಘಟನೆ ರಿಪ್ಪನ್ಪೇಟೆಯ ಗವಟೂರಿನ ಹಳೂರು ಗ್ರಾಮದಲ್ಲಿ ನಡೆದಿದೆ..
ಕಾರ್ತಿಕ್ ಎಸ್ (19) ಮೃತಪಟ್ಟ ಯುವಕನಾಗಿದ್ದಾನೆ. ಬೆಳಗಿನಜಾವ ಈ ಘಟನೆ ನಡೆದಿದೆ. ಯುವಕ ಮನೆ ಎದುರಿನಲ್ಲಿ ಮೂತ್ರಕ್ಕೆ ಹೋಗಿದ್ದಾನೆ. ಮನೆ ಮುಂಭಾಗದ IBX ಬೇಲಿ ಬಳಿಯಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಕರೆಂಟ್ ಶಾಕ್ ಹೊಡೆದಿದೆ. ಮನೆ ಮುಂಭಾಗದ ಬೇಲಿ ಮೇಲೆ ವಿದ್ಯುತ್ ವೈರ್ ತುಂಡಾಗಿ ಬಿದ್ದಿತ್ತು. ಏಕಾಏಕಿ ವಿದ್ಯುತ್ ಶಾಕ್ ತಗುಲಿ ಯುವಕ ಬೇಲಿಯ ಮೇಲೆ ಬಿದ್ದಿದ್ದ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾದರೂ ಯುವಕ ಬದುಕುಳಿಯಲಿಲ್ಲ.
ಇದನ್ನೂ ಓದಿ
- ಡಿ ಕೆ ಶಿವಕುಮಾರ ಪಿಎಸ್ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು
- ಉತ್ತರ ಕನ್ನಡದಲ್ಲಿ ನಾಳೆ ಡಿಸಿಎಂ ಡಿಕೆ ಶಿವಕುಮಾರ್ ಏಕಾಂತ ಪೂಜೆ
- ಮಹಿಳಾ ಪೊಲೀಸ್ ಅಧಿಕಾರಿ ಕುತ್ತಿಗೆಯಿಂದ 60 ಗ್ರಾಂ ಚಿನ್ನ ಎಗರಿಸಿದ ಕಳ್ಳ
ಮೃತ ಯುವಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಬಿಎ ವ್ಯಾಸಾಂಗ ಮಾಡುತಿದ್ದ.ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.







