suddibindu.in
ಅಂಕೋಲಾ: ಹಬ್ಬ ಹರಿದಿನಗಳು ಬಂದಾಗ ಸರಕಾರಿ ಕಚೇರಿಗಳಿಗೆ ರಜೆ ಇರುವುದು ಸಹಜ ಆದರೆ ಕೆಎಸ್ಆರ್ಟಿಸಿ ನಿಗಮದಲ್ಲಿ ಮಾತ್ರ ಚಾಲಕರಿಗೆ ರಜೆ ನೀಡಿರುವುದಲ್ಲದೆ ಬಸ್.ಗೂ ರಜೆ ಕೊಟ್ಟಿರುವ ಪ್ರಸಂಗವೊಂದು ಅಂಕೋಲಾ ಬಸ್ ನಿಲ್ದಾಣದಲ್ಲಿ ನಡೆದಿದೆ
ಅಂಕೋಲಾ ಬಸ್ ನಿಲ್ದಾಣದಿಂದ ಪ್ರತಿದಿನ ಮಧ್ಯಾಹ್ನ 2-10ಕ್ಕೆ ರಾಣೆಬೆನ್ನೂರಿಗೆ ಬಸ್ ಹೊರಡಬೇಕಿತ್ತು. ಆದರೆ ಮಧ್ಯಾಹ್ನ 3ಗಂಟೆಯಾದರೂ ಬಸ್ ನಿಲ್ದಾಣಕ್ಕೆ ಬರದೆ ಇರುವ ಕಾರಣ ಅದೆ ಬಸ್ಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರೊಬ್ಬರು ಸಂಬಂಧಿಸಿದ ಅಧಿಕಾರಿಗೆ ಪೋನ್ ಮಾಡಿ ವಿಚಾರಣೆ ಮಾಡಿದ್ದಾರೆ. ಆ ವೇಳೆ ಆ ಅಧಿಕಾರಿ ಇವತ್ತು ಬಕ್ರೀದ ಹಬ್ಬ ಇರುವ ಕಾರಣ ಬಸ್ಗೆ ರಜೆ ಮಾಡಲಾಗಿದೆ ಅಂತಾರೆ. ಪ್ರಯಾಣಿಕರು ಬಸ್ ಬಿಡೋದಕ್ಕೆ ಬಕ್ರೀದ್ ಹಬ್ಬಕ್ಕೆ ಏನ ಸಂಬಂಧ ಅಂತಾ ಕೇಳಿದರೆ ಚಾಲಕನಿಗೆ ಆರಂ ಇಲ್ಲ ಹೀಗಾಗಿ ಬಸ್ ಬಿಟ್ಟಿ. ಬೇಕಾದರೆ ರಾತ್ರಿ ವೇಳೆ ಬೇರೆ ಬಸ್ ಇದೆ ಅಲ್ಲಿ ತನಕ ಇದ್ದು ಹೋಗಿ ಎನ್ನುವ ಉತ್ತರ ಸಿಗುತ್ತದೆ.
ಇದನ್ನೂ ಓದಿ
- Bhatkal/ಭಟ್ಕಳ ರಾಶಿ ರಾಶಿ ಮೂಳೆ ಪತ್ತೆ ಪ್ರಕರಣ : ಸುದ್ದಿ ಪ್ರಸಾರವಾಗುತಿದ್ದಂತೆ ಎಚ್ಚೆತ್ತ ಅಧಿಕಾರಿಗಳು
- ದಿನಕರರು ದೇಶ ವಿದೇಶಗಳಲ್ಲಿ ಕನ್ನಡವನ್ನು ಪಸರಿಸಿದ ಕನ್ನಡದ ಕಟ್ಟಾಳು : ರಮೇಶ್ ಗೌಡ ಕಡಮೆ
- ಶಾಸಕ ಸತೀಶ್ ಸೈಲ್ ಗೆ ಮಧ್ಯಂತರ ಜಾಮೀನು
ಇತ್ತೀಚಿನ ದಿನದಲ್ಲಿ ಕೆಎಸ್ಆರ್ಟಿಸಿ ಅಧಿಕರಿಗಳು ಸಹ ತಮ್ಮಗೆ ಬಂದ ಹಾಗೆ ಬಸ್ ಹೋಗಿ ಬರುವ ಸಮಯ ನಿಗದಿ ಮಾಡುವ ಮೂಲಕ ಪ್ರಯಾಣಿಕರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಉಂಟಾಗುತ್ತಿರುವ ಬಸ್ ಸಮಸ್ಯೆ ಬಗ್ಗೆ ಯಾರಿಗೆ ಹೇಳಿದ್ದರು ಕಿವಿಗೆ ಹಾಕಿಕೊಳ್ಳದೆ ಕಿವುಡುತನದಿಂದ ವರ್ತಿಸುತ್ತಿದ್ದಾರೆ..