ಅಂಕೋಲಾ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆಯಿಂದ ಧಾರಾಕಾರವಾಗಿ ಮಳೆ ಸುರಿದ್ದು ಅಂಕೋಲಾ ಪಟ್ಟಣ ಜಲಾವೃತವಾಗದೆ. ಭಾರೀ ಮಳೆಗೆ ಪಟ್ಟಣದಲ್ಲಿನ ಅಂಗನವಾಡಿ ಒಳಗೆ ನೀರು ನುಗ್ಗಿ ಅಂತಾರ ಉಂಟಾಗಿರುವ ಘಟನೆ ನಡೆದಿದೆ.
- ಕುಮಟಾ ತಾಲೂಕಾ ಪಂಚಾಯತ್ ಕಾಮಗಾರಿ ಟೆಂಡರ್ನಲ್ಲಿ ಅವ್ಯವಹಾರ ಆರೋಪ
- ಡಿಸೆಂಬರ್ 6ಕ್ಕೆ ಉತ್ತರ ಕನ್ನಡಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ
- ಕಾಂಗ್ರೇಸ್ ವಿರುದ್ಧ ಕಾರವಾರದಲ್ಲಿ ಬಿಜೆಪಿ ಪ್ರತಿಭಟನೆ
ನಗರದ ರಸ್ತೆಯ ತುಂಬೆಲ್ಲಾ ನೀರು ನಿಂತು ಸಂಚಾರ ಅಸ್ಥವ್ಯಸ್ಥವಾಗಿತ್ತು. ಏಕಾಏಕಿ ತಗ್ಗು ಪ್ರದೆಶಕ್ಕೆ ನೀರು ನುಗ್ಗಿದ್ದರಿಂದ ಕೆಲಕಾಲ ಸಂಕಷ್ಠದ ಪರಿಸ್ಥಿತಿ ತಂದೊಡ್ಡಿತ್ತು. ಈ ವೇಳೆ ಕಾಲುವೆಯಲ್ಲಿ ನೀರು ಹರಿಯದೇ ಅಂಗನವಾಡಿಯ ಒಳಗೆ ನುಗ್ಗಿದೆ. ಅದೃಷ್ಟವಶಾತ್ ಮಕ್ಕಳು ಮನೆಗೆ ಹೋಗಿದ್ದರಿಂದ ಹೆಚ್ಚಿನ ಅನಾಹುತತಪ್ಪಿದ್ದು ಅಂಗನವಾಡಿಯ ಸಿಬ್ಬಂದಿಯು ನೀರು ತೆಗೆಯಲು ಹರ ಸಾಹಸ ಪಟ್ಟರು. ಇನ್ನು ಕರ್ನಾಟಕದ ಕರಾವಳಿಯಲ್ಲಿ ಮುಂದಿನ 5 ದಿನ ಭಾರೀ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.







