suddibindu.in
sirsi: ಶಿರಸಿ : ಕ್ರಿಕೇಟ್ ಆಡುತ್ತಿದ್ದ ವೇಳೆ ಯುವಕನೋರ್ವನಿಗೆ ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದಿದೆ.
- ಡಿ ಕೆ ಶಿವಕುಮಾರ ಪಿಎಸ್ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು
- ಉತ್ತರ ಕನ್ನಡದಲ್ಲಿ ನಾಳೆ ಡಿಸಿಎಂ ಡಿಕೆ ಶಿವಕುಮಾರ್ ಏಕಾಂತ ಪೂಜೆ
- ಮಹಿಳಾ ಪೊಲೀಸ್ ಅಧಿಕಾರಿ ಕುತ್ತಿಗೆಯಿಂದ 60 ಗ್ರಾಂ ಚಿನ್ನ ಎಗರಿಸಿದ ಕಳ್ಳ
ಸಾಜೀದ್ ಅಸ್ಪಾಖಲಿ ಶೇಖ್ (16) ಮೃತಪಟ್ಟ ಯುವಕನಾಗಿದ್ದಾನೆ. ಯುವಕ ತನ್ನ ಸ್ನೇಹಿತರೊಂದಿದೆ ಬನವಾಸಿಯ ಕದಂಬ ಕ್ರೀಡಾಂಗಣದಲ್ಲಿ ಕ್ರೀಕೇಟ್ ಆಡುವ ಸಂದರ್ಭದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾನೆ.
ಸಂಜೆಯಿಂದ ಶುರುವಾದ ಜಿಟಿ ಜಿಟಿ ಮಳೆ ಉಂಟಾಗಿತ್ತು ಇದರೊಂದಿದೆ ಸಿಡಿಲು ಮಿಂಚು ಉಂಟಾಗಿದೆ.ಸಿಡಿಲಿಗೆ ಗಾಯಗೊಂಡ ವಿದ್ಯಾರ್ಥಿಯನ್ನ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿಸಲಾಗಿತ್ತಾದರೂ ಮಾರ್ಗ ಮಧ್ಯ ಯುವಕ ಸಾವನ್ನಪ್ಪಿದ್ದಾನೆ
ತಹಶಿಲ್ದಾರ ಪಿರ್ಜಾದೆ ಮತ್ತು ಕಂದಾಯ ಅಧಿಕಾರಿ ಮಂಜುಳಾ ನಾಯ್ಕ ಸ್ಥಳಕ್ಕ ಭೇಟಿ ನೀಡಿದ್ದಾರೆ.







