suddibindu.in
ಕುಮಟಾ: ಉತ್ತರಕನ್ನಡ ಜಿಲ್ಲೆಯ ಖ್ಯಾತ ಉದ್ದಿಮೆದಾರರಾಗಿದ್ದ(Businessman) ರಮೇಶ ನಾಯಕ ತೊರ್ಕೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾಗಿ ನಿನ್ನೆ ನಿಧನರಾಗಿದ್ದಾರೆ.
ಮೃತ ರಮೇಶ ನಾಯಕ ಅವರಿಗೆ (70) ವರ್ಷವಾಗಿದ್ದು, ಅವರು ಕಳೆದ ಅನೇಕ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆಗಾಗಿ ಮಂಗಳೂರು(Mangalore,) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಇದನ್ನೂ ಓದಿ
- ಅಪಘಾತ ನಿಯಂತ್ರಣಕ್ಕೆ ಕುಮಟಾದಲ್ಲಿ ಬಿಗ್ ಆಕ್ಷನ್ : ನಿಯಮ ಮೀರಿ ವಾಹನ ಓಡಿಸಿದ್ರೆ ಕಾನೂನು ಕ್ರಮ
- ಸುಗಮವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಲು ಎಸ್ಪಿಗೆ ರೂಪಾಲಿ ನಾಯ್ಕ ಮನವಿ
- ದಿನಕರ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಬಂಧನ
ಇವರು ಕಳೆದ ಸರಿಸುಮಾರು 50ವರ್ಷಗಳಿಂದ ಜಿಲ್ಲೆಯಲ್ಲಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದರು, ಮೃತರು ಮಡದಿ,ಮಗಳು ಹಾಗೂ ಮಗ ಸೇರಿದಂತೆ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ತೊರ್ಕೆಯಲ್ಲಿ ಇಂದು 10-30ಕ್ಕೆ ನಡೆಯಲಿದೆ.