suddibindu.in
ಕಾರವಾರ: ಮಾರ್ಚ್ 5 ರಂದು ಶಿವಮೊಗ್ಗ(Shimoga) ಜಿಲ್ಲೆಯ ಸಾಗರದಲ್ಲಿ ನಡೆಯುವ ಶಕ್ತಿ ಸಾಗರ ಸಂಗಮ ಸಮಾವೇಶದಲ್ಲಿ, ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (former CM BS Yeddyurappa,) ಅವರಿಗೆ ಕರ್ನಾಟಕ ರಾಜ್ಯದ ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ ಇನ್ನಿತರ 26 ಒಳ ಪಂಗಡಗಳಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಗುವುದು ಎಂದು ಬಿ.ಜೆ.ಪಿ ಮುಖಂಡ ಕೆ.ಜಿ. ನಾಯ್ಕ ಹೇಳಿದರು.
ಇಂದು ಕಾರವಾರದ karwar) ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು “ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ಈಡಿಗ ಸಮುಧಾಯದ 26 ಒಳಪಂಗಡಗಳ ಏಳಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.ಶಿವಮೊಗ್ಗ ಜಿಲ್ಲೆಯ ಈಡಿಗ ಸಮುದಾಯ ಭವನಕ್ಕೆ 5ಕೋಟಿ, ಇನ್ನು ನಮ್ಮ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಮಧಾರಿ ಸಮುದಾಯ ಭವನಕ್ಕೆ 2ಕೋಟಿ (crores)ಅನುದಾನ ನೀಡಿದ್ದಾರೆ.
ಇದನ್ನೂ ಓದಿ:-
- ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ
- ತರಕಾರಿ ತುಂಬಿದ ಲಾರಿ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
ತಮ್ಮ ಸರ್ಕಾರದಲ್ಲಿ ಈಡಿಗ ಸಮುದಾಯದ ಶಾಸಕರಾದ ಹರತಾಳು ಹಾಲಪ್ಪ, ಕೋಟಾ ಶ್ರೀನಿವಾಸ ಪೂಜಾರಿ, ಶಿವಾನಂದ ನಾಯ್ಕ, ಸುನೀಲ ಕುಮಾರಾರ್ ಅವರನ್ನು ಕ್ಯಾಬಿನೇಟ್ ದರ್ಜೆಯ ಸಚಿವರಾಗಿ ಮಾಡಿದ್ದಾರೆ.ಈ ಎಲ್ಲಾ ಹಿನ್ನೆಲೆಯಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ಈಡಿಗ , ಬಿಲ್ಲವ, ನಾಮಧಾರಿ ಸೇರಿದಂತೆ ಇನ್ನಿತರ 26 ಒಳಪಂಗಡಗಳನ್ನು ಸಾಮಾಜಿಕವಾಗಿ ಮೇಲೆತ್ತುವ ಕಾರ್ಯ ಮಾಡಿರುವ ಹಿನ್ನೆಲೆಯಲ್ಲಿ ಮಾರ್ಚ್ 5ರಂದು ಸಾಗರದಲ್ಲಿ ನಡೆಯುವ ಶಕ್ತಿ ಸಾಗರ ಸಂಗಮ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸಿ ಸನ್ಮಾನಿಸಲಾಗುವುದು” ಎಂದರು.
ಇನ್ನು ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ತತ್ವ ಭೋದನೆ ಮಾಡಲಾಗುವುದು. ಹಾಗೂ ಸಮಾರಂಭದಲ್ಲಿ ಸಮಾಜದ ಮುಖಂಡರು ಹಾಗೂ ಧರ್ಮಗುರುಗಳು ಪಾಲ್ಗೊಳ್ಳಲಿದ್ದಾರೆ.ಸಮಾರಂಭಕ್ಕೆ ಐದು ಸಾವಿರ ಜನ ಸೇರುವ ನಿರೀಕ್ಷೆಯಿದೆ. ಇನ್ನೂ ಈ ಕಾರ್ಯಕ್ರಮ ಪಕ್ಷಾತೀತವಾಗಿ ಆಯೋಜನೆ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಎಲ್ಲಾ ನಾಮಧಾರಿ ಸಮುದಾಯದ ಮುಖಂಡರು ಪಾಲ್ಗೊಳ್ಳಬೇಕಾಗಿ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಪ್ರಮುಖರಾದ ಕೆ.ಜಿ ನಾಯ್ಕ ಸಿದ್ದಾಪುರ, ಗೋವಿಂದ ನಾಯ್ಕ ಭಟ್ಕಳ, ರಾಜೇಂದ್ರ ನಾಯ್ಕ, ಪ್ರಶಾಂತ ನಾಯ್ಕ, ವಿಶ್ವನಾಥ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.